*ಸಾಫ್ಟವೇರ್ ಉದ್ಯೋಗಿಗಳು*
ಮಾತಿನ ಸದ್ದಿಲ್ಲ
ನಗುವಿನ ಅಲೆಯಿಲ್ಲ
ಸೂರ್ಯೋದಯ
ಸೂರ್ಯಾಸ್ತಮ ಕಂಡಿಲ್ಲ
ಸಮಯದ ಪರಿವಿಲ್ಲ
ಹಸಿವಿನ ಅರಿವಿಲ್ಲ
ಇವರು ಸಾಫ್ಟ್ವೇರ್ ಉದ್ಯೋಗಿಗಳು
ಸಂಬಂಧಗಳು ತಿಳಿದಿಲ್ಲ
ಭಾವಗಳ ವಿನಿಯೋಗಕೆ
ಸಮಯವಿಲ್ಲ
ಮನೆಯೊಳಿದ್ದರೂ ಮನೆಯ
ಆಗುಹೋಗುಗಳ ಅರಿವಿಲ್ಲ
ಆರೋಗ್ಯದೆಡೆ ಗಮನವಿಲ್ಲ
ಬಿಸಿ..ಬಿಸಿ ಊಟ ..ತಿಂಡಿ
ಮಾಡುವ ಭಾಗ್ಯವಿಲ್ಲ
ಇವರು ಸಾಫ್ಟ್ವೇರ್ ಉದ್ಯೋಗಿಗಳು
ಇವರು...ಸಾಫ್ಟ್ವೇರ್ ಉದ್ಯೋಗಿಗಳು
ಕುಳಿತುಕೊಳ್ಳಲೊಂದು ಕುರ್ಚಿ
ಎದುರಿಗೊಂದು ಟೇಬಲ್
ಟೇಬಲ್ ಮೇಲೊಂದು ಲ್ಯಾಪ್ಟಾಪ್
ಪಕ್ಕದಲ್ಲೊಂದು ಮೊಬೈಲ್
ಇಷ್ಟೇ ಇವರ ಪ್ರಪಂಚ
ಉಸಿರಾಡಲು ಸಮಯವಿಲ್ಲ ಕೊಂಚ
ಇವರು ಸಾಫ್ಟವೇರ್ ಉದ್ಯೋಗಿಗಳು
ಇವರು...ಸಾಫ್ಟವೇರ್ ಉದ್ಯೋಗಿಗಳು
ಕುಳಿತಲ್ಲಿಯೇ ಕುಳಿತು
ಕಾಲುಗಳೆರಡು ಬಾತು
ಮಾತುಗಳೆಲ್ಲವು ಮರೆತು
ಬದುಕಾಗಿದೆ ಬರಡು
ಮನವಾಗಿದೆ ಕೊರಡು
ಕಣ್ಣಾಗಿವೆ ಕುರುಡು
ಇವರು ಸಾಫ್ಟವೇರ್ ಉದ್ಯೋಗಿಗಳು
ಹರಿಬರಿಯಲ್ಲಿ ಮಾಡಿಟ್ಟ ಅಡುಗೆ
ಅಣಕಿಸುತಿದೆ
ಗರಿಗೆದರಿದ ಆಸೆಗಳು ಮುದುಡಿ
ಕುಳಿತಿವೆ
ಅವನೊಂದು ಕೋಣೆ
ಇವಳೊಂದು ಕೋಣೆ
ಸಂಸಾರದ ವೀಣೆ
ಮಿಡಿವುದು ಹೇಗೋ ನಾ ಕಾಣೆ
ಎಲ್ಲರೂ ಇದ್ದರು ಎಲ್ಲವೂ ಇದ್ದರು
ಇವರು ಒಂಟಿ
ಇವರು ಸಾಫ್ಟವೇರ್ ಉದ್ಯೋಗಿಗಳು
ಇವರು...ಸಾಫ್ಟವೇರ್ ಉದ್ಯೋಗಿಗಳು
*ಟೀಕೆ ಅಲ್ಲ ವಾಸ್ತವ*.!!
😞😞😞
కామెంట్లు లేవు:
కామెంట్ను పోస్ట్ చేయండి